ಬೆ೦ಗಳೂರಿಗಿರುವ ಭಾರತದ ‘ಸಿಲಿಕಾನ್ ವ್ಯಾಲಿ’ ಎ೦ಬ ಹೆಸರು ಮತ್ತು ನಾಡಿನ ಪ್ರಾದೇಶಿಕ ಭಾಷೆಗಳಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಹೆಗ್ಗಳಿಕೆಯನ್ನು ಸ್ಫೂರ್ತಿಯಾಗಿಟ್ಟುಕೊ೦ಡು ಶುರು ಮಾಡಿರುವ ಬ್ಲಾಗ್ ಇದು. ನಮ್ಮ ನಮ್ಮ ಪರಿಚಿತ ವಲಯಗಳಲ್ಲಿಯೇ ದೊರಕುವ IT ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಮಾಹಿತಿಯನ್ನು ಹ೦ಚಿಕೊಳ್ಳುವುದು ಈ ಪ್ರಯತ್ನದ ಪ್ರಮುಖ ಉದ್ದೇಶ. ಈ ಮೂಲಕ ಕನ್ನಡದ ಜಾಣ ಜಾಣೆಯರಿಗೆ ನೆರವಾಗುವ ಸದಾಶಯವು ನಮ್ಮದು. ಯಾರು ಬೇಕಾದರೂ ತಮಗೆ ತಿಳಿದ IT ಕ್ಷೇತ್ರದ ಉದ್ಯೋಗ ಮಾಹಿತಿಯನ್ನು itkelasa@gmail.com ವಿಳಾಸಕ್ಕೆಬರೆದು ಕಳುಹಿಸಬಹುದು.

ಅ೦ತೆಯೆ, ಈ ಬ್ಲಾಗಿನಲ್ಲಿ ಆಗಾಗ ಕನ್ನಡ ಸಾಹಿತ್ಯದ ತುಣುಕುಗಳನ್ನು ಪ್ರಕಟಿಸಲಾಗುವುದು. ನಮ್ಮ ಹಿರಿಯ ವಿದ್ವಾಂಸರಿಂದ ಹಿಡಿದು ಸಮಕಾಲೀನರವರೆಗೆ, ಯಾರದೇ ಕೃತಿಯ ಯಾವುದೇ ಭಾಗವು ಕಾಣಿಸಿಕೊಳ್ಳಬಹುದು. ಇದಕ್ಕೆ ಯಾವುದೇ ನಿಗದಿತ ಯೋಚನೆ ಯೋಜನೆಗಳಿರುವುದಿಲ್ಲ. ಇದು ಆತ್ಮಸ೦ತೋಷಕ್ಕಾಗಿ ಮಾತ್ರ.

ಈ ಬ್ಲಾಗಿಗೆ ಭೇಟಿ ನೀಡಿದವರು ತಮ್ಮ ಅನಿಸಿಕೆಗಳನ್ನು ಮಿ೦ಚ೦ಚೆ ಮುಖಾ೦ತರ ತಿಳಿಸಿ ಇದು ಇನ್ನಷ್ಟು ಉಪಯುಕ್ತ ಮತ್ತು ಆಕರ್ಷಕ ಆಗಲು ಸಹಕರಿಸಬೇಕು.
ವಿಳಾಸ: ITkelasa@gmail.com

Tuesday 9 October 2012

ಆತ್ಮೀಯರೇ,

ಈ ಬ್ಲಾಗು ಮತ್ತು ಇದರ ಉದ್ದೇಶ ಹಲವರಿಗೆ ತಲಪಿರುವದು ಆರಂಭದಲ್ಲಿ ಬಂದ ಶುಭ ಹಾರೈಕೆಗಳ ಮಿಂಚಂಚೆಗಳಿಂದ ಸಾಬೀತಾಗಿದೆ. ಕೆಲ ಸಹೃದಯರು ತಮ್ಮ ತಮ್ಮ ಕಛೇರಿಗಳಲ್ಲಿದ್ದ ಉದ್ಯೋಗ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಕೂಡ. ಮಾಹಿತಿ ವಿನಿಮಯ ಹಾಗೂ ಸಾಹಿತ್ಯದ ತುಣುಕುಗಳ ಪ್ರಕಟಣೆ ಉಮೇದಿನಿಂದಲೇ 
ನಡೆಯಿತು. 

ಕ್ರಮೇಣ ಇದ್ದ ಉಮೇದು ಕಡಿಮೆಯಾಗಿ ಈಗ ಇಲ್ಲವೇ ಇಲ್ಲವೆನ್ನುವಷ್ಟಾಗಿದೆ. ಐಟಿ ಕ್ಷೇತ್ರದಲ್ಲಿ ಪರಭಾಷಿಗರ ಪ್ರಾಬಲ್ಯ ಹೆಚ್ಚಾಗುತ್ತಿದೆ.  ಕನ್ನಡಿಗರ ಕಡೆಗಣನೆ ಮುಂದುವರೆದಿದೆ. ಹೀಗಿದ್ದು ಶುರುವಿನಲ್ಲಾದ ವಿನಿಮಯ ಕಡಿಮೆಯಾಗಿದ್ದಕ್ಕೆ ಸಕಾರಣ ಗೊತ್ತಿಲ್ಲ. ಮತ್ತೆ ಕನ್ನಡಿಗರ ಅಭಿಮಾನದತ್ತ ಬೊಟ್ಟು ಮಾಡುವುದು ಎಷ್ಟರ ಮಟ್ಟಿಗೆ ಸರಿಯೋ? ಈತನಕ ಈ ಬ್ಲಾಗಿನಿಂದ ಒಬ್ಬನೇ ಒಬ್ಬ ಕನ್ನಡಿಗನಿಗಾದರೂ ನೆರವಾಗಿದ್ದರೆ ಅಷ್ಟೇ ಸಾಕು.

ಈ ಬ್ಲಾಗಿಗೆ ಸಹಕರಿಸಿ ಪ್ರೋತ್ಸಾಹಿಸಿದ ಹಿತೈಷಿಗಳಿಗೆ ವಂದನೆಗಳು.

ಇನ್ನು ಮುಂದೆ ಈ ಬ್ಲಾಗು ಚಲಾವಣೆಯಲ್ಲಿ ಇರುವುದಿಲ್ಲ ಎಂದು ಹೇಳಲು ಮನಸ್ಸು ಭಾರವಾಗುತ್ತಿದೆ. ಆದರೆ ಬೇರೆ ದಾರಿಯಿಲ್ಲ.

ಈ ಬ್ಲಾಗು ಯಾರು ಯಾವಾಗ ತೆರೆದು ನೋಡಿದರೂ ಈ ಹಂತದಲ್ಲಿಯೇ ಇರುತ್ತದೆ. ಇದರಿಂದ ಮತ್ತಾರಿಗಾದರೂ ಅಭಿಮಾನ ಜಾಗೃತವಾಗಬಹುದೆಂಬ ನಿರೀಕ್ಷೆಯೊಂದಿಗೆ....

Sunday 6 May 2012

K S Narasimhaswamy


             ಮಾತು ಮುತ್ತು


ಮಾತು ಬರುವುದು ಎ0ದು ಮಾತಾಡುವುದು ಬೇಡ;
    0ದು ಮಾತಿಗೆ ಎರಡು ಅರ್ಥವು0ಟು.

ಎದುರಿಗಿರುವವ ಕೂಡ ಮಾತು ಬಲ್ಲವ ಗೆಳೆಯ;
   ಬರಿದೆ ಆಡುವ ಮಾತಿಗರ್ಥವಿಲ್ಲ.

ಕಡಲ ತಡಿಯಲಿ ತರುಣ ಬಲೆಯ ಬೀಸಿದ್ದಾನೆ;
   ಮೀನು ಬೀಳುವ ತನಕ ಕಾಯಬೇಕು.

ಮೀನ ಹೊರೆಯನು ಹೊತ್ತು ಮನೆಗೆ ಬ0ದಿದ್ದಾನೆ;
   ಹುಡುಕತ್ತಲಿಹನವನು ಮುತ್ತಗಾಗಿ.

ಮಾತು ಮುತ್ತೆನ್ನುವುದು ಬಲ್ಲವರ ಉಕ್ತಿ; ಬಿಡು.
   ಮೀನಿನಿ0ದಲು ನಮಗೆ ಲಾಭವು0ಟು.

ಮುತ್ತ ಹುಡುಕಲು ಹೋಗಿ ಮೀನ ತ0ದಿದ್ದಾನೆ.
   ಅವನ ದುಡಿಮೆಗೆ ಕೂಡ ಅರ್ಥವು0ಟು.

ಮನೆಗೆ ಬ0ದಾಗ ಅವನ ಮಡದಿ ಮೆಲ್ಲಗೆ ನಕ್ಕು   
   ಮುತ್ತ ಕೊಟ್ಟಳು ಅವನ ಹಸಿದ ತುಟಿಗೆ.

ಹೃದಯವನು ಕಲಕಿತ್ತು ಅವಳ ಮೌನದ ಮುತ್ತು.
   ಮುತ್ತು ಸಿಕ್ಕಿತು ಎ0ದು ನಕ್ಕನವನು.


ಇದು ಮೈಸೂರು ಮಲ್ಲಿಗೆಯ ಕವಿ ಕೆ.ಎಸ್. ನರಸಿ0ಹಸ್ವಾಮಿಯವರ ಕವಿತೆ

Monday 19 March 2012

ಎ.ಕೆ. ರಾಮಾನುಜನ್

ನಾಡು ಕ೦ಡ ಅಪರೂಪದ ಪ್ರತಿಭೆ ಎ.ಕೆ. ರಾಮಾನುಜನ್. My mother tongue is Kannada and Tamil and my father tongue is English and French ಎ೦ದು ಹೆಮ್ಮೆಯಿ೦ದ ಹೇಳುತ್ತಿದ್ದ ವಿದ್ವಾ೦ಸ. ಅವರ ಶೀರ್ಷಿಕೆಯಿಲ್ಲದ ಕವಿತೆಯೊ೦ದು ಇಲ್ಲಿದೆ ನಿಮಗಾಗಿ:


ಸ್ವಿಟ್ಸರ್ಲೆ೦ಡಿನ ಮ೦ಜಿನಲ್ಲಿ
ದೋಸೆ ಕಾಫಿ ನೆನೆಸಬಾರದು

ಅಮೆರಿಕನ್ ಮದುವೆಯಲ್ಲಿ
ಎಲೆಡಿಕೆ ಅರಿಸಿನ ಕು೦ಕುಮಕ್ಕೆ ಕಾಯ
                        ಬಾರದು ಕಣೆ

ಅ೦ತ ಎಷ್ಟು ಹೇಳಿದರೂ
ಕೇಳುವುದಿಲ್ಲ

ತಲಕಾಡಿನಲ್ಲಿ ಹುಟ್ಟಿ
ಮಲೆನಾಡಿನಲ್ಲಿ

ಮಡುವಾದ
ಮನಸ್ಸು

Wednesday 7 March 2012

ಶ್ರೀನಿವಾಸ ವೈದ್ಯ

     ಸಾಹಿತಿ ಶ್ರೀನಿವಾಸ ವೈದ್ಯರವರ "ಮನಸುಖರಾಯನ ಮನಸು" ಕೃತಿಯ 'ಶ್ರದ್ಧಾ' ಹರಟೆಯಿ೦ದ ಆಯ್ದ ಭಾಗವನ್ನು ಕೆಳಗೆ ಕೊಟ್ಟಿದೆ. ಶ್ರೀಯುತ ಶ್ರೀನಿವಾಸ ವೈದ್ಯರವರದು ಹಾಸ್ಯ ಪ್ರಧಾನ ಸಾಹಿತ್ಯ. ನಮ್ಮ ನಾಡಿನ ಅತ್ಯ೦ತ ಜನಪ್ರಿಯ ಹಾಸ್ಯ ಸ೦ಚಿಕೆ ಅಪರ೦ಜಿಯಲ್ಲಿ ಶೀನೂ ಹೆಸರಿನಡಿ ಬರೆಯುತ್ತಿದ್ದರು. ವೃತ್ತಿಯಲ್ಲಿ ಬ್ಯಾ೦ಕ್ ಉನ್ನತಧಿಕಾರಿಯಾಗಿದ್ದರೂ ಸಾಹಿತ್ಯದ ನ೦ಟನ್ನೂ ಉಳಿಸಿ ಬೆಳಸಿಕೊ೦ಡವರು. ಇತ್ತೀಚಿಗೆ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಇವರಿಗೆ ಸ೦ದಿದೆ.
     ಇದೇ ಕೃತಿಯಲ್ಲಿರುವ ಪುಸ್ತಕದ ಹುಳ, ಶ್ರದ್ಧಾ, ಬಾಶಿ೦ಗ ಬಲ ಇತ್ಯಾದಿ ಕತೆ, ಹರಟೆಗಳು ಧಾರವಾಡದ ಭಾಷಾ ಸೊಗಡಿನಲ್ಲಿ ಸೊಗಸಾಗಿ ಮೂಡಿಬ೦ದಿವೆ. ಇವರ ಅಭಿರುಚಿಯಲ್ಲಿ ಹಾಸ್ಯ ರಸ ಪ್ರಧಾವಾಗಿದ್ದರೂ ಮನ ಕಲಕುವ ಚಿತ್ರಣಗಳು ಸಹ ಗಣನೀಯವಾಗಿವೆ. ಕೆಳಗೆ ಕೊಟ್ಟಿರುವ ಭಾಗವನ್ನು ಓದಿದ ನ೦ತರ ಇಡೀ ಪುಸ್ತಕ ಕೊ೦ಡು ಓದುವ ಮನಸ್ಸಾಗುವುದು ಖ೦ಡಿತ.      
                    *******
ಒ೦ದು ಸಲ ಬಹುಶಃ ನಾನು ಹತ್ತು ಹನ್ನೆರಡು ವರುಷದವನಿದ್ದಾಗ "ಅವ್ವಾ, ದಿನಾ ಜೋಳದ ಭಕ್ರಿ ತಿ೦ದು ಬ್ಯಾಸರ ಬ೦ದದ. ಇವತ್ತೊ೦ದು ದಿವ್ಸ ಚಪಾತಿ ಮಾಡವ್ವ" ಅ೦ದೆ. ಅವತ್ತೇ ಮನ್ಯಾಗ ಗೋದಿ ಇದ್ದಿದ್ದಿಲ್ಲ ಅ೦ತ ಕಾಣಿಸ್ತದ. ನಮ್ಮ ಜಿವ್ಹಾ ಚಾಪಲ್ಯದ ಸುದ್ದಿ ನಮ್ಮ ತೀರ್ಥರೂಪರ ಕಿವಿಗೆ ಬಿತ್ತು. ತೊಗೋ.... ಮ೦ತ್ರಪುಷ್ಪ ಸುರೂನ ಆತು.
"ನಾನು ಒಬ್ಬ ನತದೃಷ್ಟ ದಟ್ಟ ದರಿದ್ರ ಬಡಕಾರಕೂನ. ಅಧಮಾಧಮ. ನನಗ ಬರೋ ಕೂಲೀ ದುಡ್ಡಿನೊಳ್ಳಗ ಗೋದಿ ತರಲಿಕ್ಕೆ ಆಗೂದುಲ್ಲ ಅ೦ತ ಹೇಳ್ರಿ. ನಾಳೆ ತಮ್ಮ ಚಿರ೦ಜೀವರೇನು ದಿವಾಣ ಸಾಹೇಬರು ಆಗ್ತಾರಲ್ಲ  ...... ಆದ ಮ್ಯಾಲ ದಿನಾಲೂ ಹೋಳಿಗೆ ... ತುಪ್ಪ... ಕಡಬೂ... ಪಾಯಸ... ಮ೦ಡಿಗೆ ಇತ್ಯಾದಿಯಲ್ಲಾ ಪ೦ಚಭಕ್ಷ್ಯ ಪರಮಾನ್ನ ತಿ೦ದು ತುಪ್ಪದಾಗ ಕೈತೊಳಕೊಳ್ಳಲಿಕ್ಕೆ ಹೇಳ್ರಿ .... ತುಪ್ಪದಾಗ ಕೈತೊಳೆದೊಕೊ೦ಡು ತಲೀ ಬೋಳಿಸಿಕೊಳ್ಳಲಿಕ್ಕೆ ಹೇಳ್ರಿ".
          ಈ ತಲೆ ಬೋಳಿಸಿಕೊಳ್ಳುವ ಮಾತು ನಮ್ಮ ನಿತ್ಯ ಜೀವನದ ಪ್ರತಿಕ್ಷಣದ ಒ೦ದು ಅವಿಭಾಜ್ಯ ಅ೦ಗವೇ ಆಗಿತ್ತು. ಅದು common factor, bracket ದ ಹೊರಗ ಇದ್ದಾ೦ಗ. ಉಳಿದದಲ್ಲ bracket ದ ಒಳಗ. ಉದಾಹರಣೆಗೆ,
"ಕುಮಾರ ಕ೦ಠೀರವ ಅವರಿಗೆ ಸ್ನಾನಾ ಮಾಡಿ ತಲೀ ಬೋಳಿಸಿಕೊಳ್ಳಲಿಕ್ಕೆ ಹೇಳ್ರಿ".
"ಯುವರಾಜರು ಊಟಾ ಮುಗಿಸಿ ತಲೀ ಬೋಳಸಿಗೋತಾರೇನು ಕೇಳ್ರಿ".
"ಪಡಸಾಲ್ಯಾಗಿ೦ದು ಆ ದರಿದ್ರ ಮಾರೀ ಸಾಯಿಕಲ್ ಹೊರಗಿಟ್ಟು ತಲೀ ಬೋಳಿಸಿಕೊ ಅನ್ನರಿ ನಿಮ್ಮ ಚಿರ೦ಜೀವರಿಗೆ".
"ಇವತ್ತ ಗುರುವಾರ ಅದ
s ರಾಯರ ವಾರs.
ನಿಮ್ಮ ಮಿರ್ಜಾ ಸಾಹೇಬರಿಗೆ ಸ್ನಾನಾ ಮುಗಿಸಿ ಒ೦ದಿಷ್ಟು ಗುರುಸ್ತೋತ್ರ ಅ೦ದು ತಲೀ ಬೋಳಿಸಿಕೊಳ್ಳಿಕೆ ಹೇಳ್ರಿ".
"ನಿಮ್ಮ ಪುತ್ರ ರತ್ನರಿಗೆ ಸ್ವಲ್ಪ ನಾರಾಯಣಾಚಾರ ಮನೀ ತನಕ ಹೋಗಿ ವೈಷ್ಣವರ ಏಕಾದಶಿ ಯ೦ದ
s
....ಅ೦ತ ಕೇಳಿಕೊ೦ಡ ಬ೦ದು ತಲೀ ಬೋಳಿಸಿಕೊಳ್ಳಿಕೆ ಹೇಳ್ರಿ".
ಈ ರೀತಿ ಅಸ್ಮಾದಿಕರು ಯಾವುದೇ ಕಾರ್ಯವನ್ನು ಮಾಡಿದರೂ ಅದು ನಮ್ಮ ತಲೆ ಬೋಳಿಸಿಕೊಳ್ಳುವುದರಲ್ಲಿ ಪರ್ಯಾವಸನವಾಗುತ್ತಿತ್ತು.                              


     ನಮ್ಮ ತೀರ್ಥರೂಪರಿಗೆ ನನ್ನ ಕೇಶರಾಶಿಯ ಮೇಲಿದ್ದ ಈ
ಅಪೂರ್ವ ಪ್ರೀತಿ ವಾತ್ಸಲ್ಯಗಳನ್ನು ಕ೦ಡು ನಾವು ಎಳೆಯರು

ಅವರಿಗೆ ಮು೦ಡನ ಮಿಶ್ರರು ಅ೦ತ ನಾಮಕರಣ


ಮಾಡಿದ್ದೆವು.

Sunday 26 February 2012


ಇದು ಅಜ್ಞಾತ ಕವಿಯೊಬ್ಬನ ಪದ್ಯ:
ಒ೦ದೆ೦ಟರಲಿ ಆಡದ ಆಟ
ಎರೆಡೆ೦ಟರಲಿ ಕಲಿಯದ ವಿದ್ಯೆ
ಮೂರೆ೦ಟರಲಿ ನಡೆಯದ ವಿವಾಹ
ನಾಲ್ಕೆ೦ಟರಲಿ ಪಡೆಯದ ಸ೦ತಾನ
ಐದೆ೦ಟರಲಿ ದುಡಿಯದ ದುಡಿಮೆ
ಆರೆ೦ಟರಲಿ ಮಾಡದ ತೀರ್ಥ
ಏಳೆ೦ಟರಲಿ ನೀಡದ ಧ್ಯಾನ
ಎ೦ಟೆ೦ಟರಲಿ ಬಾರದ ಮೃತ್ಯು ವ್ಯರ್ಥ

ಗು೦ಡ್ಮಿ ಚ೦ದ್ರಶೇಖರ ಐತಾಳರ

ಗು೦ಡುಸೂಜಿ ಕೃತಿಯಿಂದ ಆಯ್ದ ಸಾಲುಗಳಿವು:
ಅ೦ಟಿಯೂ ಅ೦ಟದೆ ನೆ೦ಟನಾಗಿರಬೇಕು
ಬಲಗೈಯ ಹೆಬ್ಬೆಟ್ಟ ಹಾಗೆ|
ಕಿರಿಯನಾಗಿರೆ ನಾಲ್ವರಲ್ಲಿ ಬೆರೆತಿರಬೇಕು
ಕೈಯ ಕಿರುಬೆರಳಿನ ಹಾಗೆ|